ಜಾಮಿನ್, ಜ್ಯೂಲಿಯಸ್ ಸಿಲೆಸ್ಟಿನ್
1818-1886. ಫ್ರಾನ್ಸಿನ ಭೌತವಿಜ್ಞಾನಿ, ಬೆಳಕಿನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ವಹಿಸಿ ಸಂಶೋಧನೆ ಮಾಡಿದ.  ತನ್ನ ಪ್ರಾಧ್ಯಾಪಕ ಬ್ರಿವಿಸ್ಟರನ ಸಲಹೆಯ ಮೇರೆಗೆ ವ್ಯತಿಕರಣಮಾಪಕವೆಂಬ ಉಪಕರಣವನ್ನು ಉಪಜ್ಞಿಸಿದ.  ಇದಕ್ಕೆ ಜಾಮಿನ್ ವ್ಯತಿಕರಣ ಮಾಪಕವೆಂದೇ ಹೆಸರು.  ಜಾಮಿನ್ ವಕ್ರೀಭವನ ಮಾಪಕವೆಂಬ ಹೆಸರೂ ರೂಢಿಯಲ್ಲಿವೆ.  ಬೆಳಕಿನ ವೇಗವನ್ನು ನಿರ್ಧರಿಸುವಲ್ಲಿ ಈ ಉಪಕರಣದ ಬಳಕೆ ಉಂಟು.
(ಡಿ.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ